'ಒನ್ಸ್ ಮೋರ್ ಕೌರವ' ಸಿನಿಮಾ ಈಗಾಗಲೇ ಹಾಡುಗಳ ಮೂಲಕ ಸಖತ್ ಸದ್ದು ಮಾಡುತ್ತಿದೆ. ಚಿತ್ರದ ಟ್ರೇಲರ್ ನೋಡಿದವರಿಗೆ ಒಂದು ಕ್ಷಣ ಆ ಕೌರವ ನೆನಪಾಗುತ್ತಾನೆ. 'ಒನ್ಸ್ ಮೋರ್ ಕೌರವ' ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ರಾಜ್ಯಾದಂತ್ಯ ತೆರೆಗೆ ಬರಲಿದೆ. ಇನ್ನು ಈ ಚಿತ್ರದ ಬಗ್ಗೆ ಹೇಳಬೇಕು ಅಂದರೆ ಇದು ಪಕ್ಕಾ ಮಹೇಂದರ್ ಸ್ಟೈಲ್ ಸಿನಿಮಾ. 6 ವರ್ಷದ ನಂತರ ಮತ್ತೆ ಮಹೇಂದರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅವರ ಹಳೆಯ ಚಿತ್ರಗಳನ್ನು ನೋಡಿ ಇಷ್ಟಪಟ್ಟವರಿಗೆ ಈ ಚಿತ್ರ ಕೂಡ ಇಷ್ಟ ಆಗಲಿದೆಯಂತೆ.
ಇನ್ನು ಈ ಚಿತ್ರದ ನಾಯಕನಾಗಿ ನರೇಶ್ ಗೌಡ ಕಾಣಿಸಿಕೊಂಡಿದ್ದಾರೆ. ನರೇಶ್ ಅವರ ಮೊದಲ ಚಿತ್ರ ಇದಾಗಿದ್ದು, ಚಿತ್ರಕ್ಕೆ ಅವರೇ ನಿರ್ಮಾಪಕರು ಕೂಡ. ಇನ್ನು ನರೇಶ್ ಗೆ ಜೋಡಿಯಾಗಿ ಅನುಷಾ ಕಾಣಿಸಿಕೊಂಡಿದ್ದಾರೆ. 'ಸೋಡಾಬುಡ್ಡಿ' ಬಳಿಕ ಅನುಷಾ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ಅನುಷಾ ಇಲ್ಲಿ ಖಡಕ್ ಹುಡುಗಿ ಆಗಿದ್ದಾರೆ.